ಲೇಖಕರ ಕುರಿತು

ಡಾ. ಮಲ್ಲಿಕಾರ್ಜುನ ಖಾನಪೇಠ

ಡಾ. ಮಲ್ಲಿಕಾರ್ಜುನ ಖಾನಪೇಠ ಅವರು ಎಮ್ ಬಿ ಬಿ ಎಸ್ ಪದವಿಯನ್ನು 1992 ರಲ್ಲಿ ಮತ್ತು ಸ್ನಾತ್ತಕೋತ್ತರ ಎಂ ಡಿ ಪದವಿಯನ್ನು 1995 ಬೆಳಗಾವಿಯ ಜವಾಹರ ಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂಣðಗೊಳಿಸಿ, ಡಿ ಎನ್ ಬಿ ಕಿಡ್ನಿ ರೋಗದ ಪದವಿಯನ್ನು ನಡಿಯಾಡದ ಮುಲ್ಜಿಬಾಯಿ ಪಟೇಲ ಯುರಾಲಾಜಿಕಲ್ ಆಸ್ಪತ್ರೆಯಲ್ಲಿ 2005 ರಲ್ಲಿ ಪಡೆದು, ಸದ್ಯಕ್ಕೆ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ

ಪ್ರಧಾನ ಕಿಡ್ನಿ ರೋಗ ತಜ್ಞರಾಗಿ ಕಾರ್ಯನಿವðಹಿಸುತ್ತಿದ್ದಾರೆ.

ಡಾ. ಸಂಜಯ ಪಂಡ್ಯಾಎಂಡಿ DNB (ನೆಫ್ರಾಲಜಿ) ಮೂತ್ರಪಿಂಡಶಾಸ್ತ್ರಜ್ಞ

ಡಾ. ಸಂಜಯ ಪಂಡ್ಯಾ ಹಿರಿಯ ನೆಫ್ರೊಲಾಜಿಸ್ಟಾಗಿ ಗುಜರಾತಿನ ರಾಜಕೋಟನಲ್ಲಿ ಕಾರ್ಯನಿವðಹಿಸುತ್ತಿದ್ದಾರೆ.

ಡಾ. ಸಂಜಯ ಪಂಡ್ಯಾ ಅವರು ಕಿಡ್ನಿ ರೋಗದ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ.ಅವರು ಬಹಳಷ್ಟು ಜನರ ಕಿಡ್ನಿ ರೋಗ, ಆರೈಕೆ, ತಡೆಗಟ್ಟುವಿಕೆ ಕುರಿತಾದ ಜಾಗೃತಿಯನ್ನು ಮೂಡಿಸಲು ಕಿಡ್ನಿ ಶಿಕ್ಷಣ ಪ್ರತಿಷ್ಠಾನವನ್ನು ಪ್ರಾರಂಭಿಸಿದ್ದಾರೆ. ಇದಲ್ಲದೇ ಇತರ ಕಿಡ್ನಿ ತಜ್ಞವೈದ್ಯರೊಂದಿಗೆ ಕಿಡ್ನಿ ರೋಗದ ಮಾಹಿತಿಯನ್ನು ಸಕಲರಿಗೂ ತಿಳಿಸಲು ವಿಶ್ವದ ಅನೇಕ ಭಾಷೆಗಳಲ್ಲಿ ಈ ಪುಸ್ತಕವನ್ನು ಬರೆಯಲು ಸಹಕಾರಿಯಾಗಿದ್ದಾರೆ. ಅವರು ಹಿಂದಿ, ಇಂಗ್ಲೀಷ ಮತ್ತು ಗುಜರಾತಿ ಭಾಷೆಯಲ್ಲಿ ಪುಸ್ತಕವನ್ನು ರಚಿಸಿದ್ದಾರೆ.

ವಿಶ್ವದ ವಿವಿಧ ಭಾಗದ ಜನರಿಗೆ ಕಿಡ್ನಿ ರೋಗದ ಮಾಹಿತಿಯನ್ನು ಕೊಡಮಾಡಲು ಬೇರೆ ಬೇರೆ ಭಾಷೆಗಳಲ್ಲಿ ಪುಸ್ತಕವನ್ನು ರಚಿಸಿ, ಇದಲ್ಲದೇ www.KidneyEducation.com ಎಂಬ ವೆಬ್ ಸೈಟ್ ಅನ್ನು ಪ್ರಾರಂಭಿಸಿದರು. ಎಲ್ಲ ಭಾಷೆಯ ವೆಬ್ ಸೈಟಗಳಿಂದ ಯಾವುದೇ ಮಾಹಿತಿಯನ್ನು ಉಚಿತವಾಗಿ ಓದಬಹುದು ಮತ್ತು ಮುದ್ರಣವನ್ನು ಪಡೆಯಬಹುದು. ಈ ವೆಬ್ ಸೈಟ್ ಅನ್ನು ಕೇವಲ ಮೂರು ವಷðಗಳಲ್ಲಿ ಸುಮಾರು 8 ಮಿಲಿಯನ್ ಬಾರಿ ಭೇಟಿ ಕೊಟ್ಟಿದ್ದಾರೆ.

wikipedia
Indian Society of Nephrology
nkf
Kidney India
http://nefros.net
magyar nephrological tarsasag