ಪುಸ್ತಕದ ಕುರಿತು

ಕಿಡ್ನಿ ರೋಗಗಳ ತಡೆಗಟ್ಟುವಿಕೆ ಮತ್ತು ಮೂತ್ರಪಿಂಡ ರೋಗಿಗಳಿಗೆ ಜಾಗೃತೆ ಮೂಡಿಸಲು ಕನ್ನಡ ಭಾಷೆಯಲ್ಲಿ ಇದೊಂದು ಒಳ್ಳೆಯ "ಪುಸ್ತಕ."

ಕಿಡ್ನಿ ರೋಗವು ಅತ್ಯಂತ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ ಮತ್ತು ಇದರ ಕುರಿತು ಸಮಾಜದಲ್ಲಿ ಜಾಗೃತಿ ಮತ್ತು ಮಾಹಿತಿ ಕಡಿಮೆ ಇದೆ. ಕೊನೆಯ ಹಂತದ ದೀರ್ಘಕಾಲೀನ ಕಿಡ್ನಿ ರೋಗದ ಚಿಕಿತ್ಸೆಯು ಅತ್ಯಂತ ವೆಚ್ಚದಾಯಕ. ಆದ್ದರಿಂದ ಇದನ್ನು ಶಿಘ್ರವಾಗಿ ಕಂಡುಹಿಡಿದು ತಡೆಗಟ್ಟುವದು ಅತ್ಯವಶ್ಯ.

ಡಾ. ಸಂಜಯ ಪಂಡ್ಯಾ ಅವರು ರಚಿಸಿದ ಪುಸ್ತಕವನ್ನು ಡಾ ಮಲ್ಲಿಕಾರ್ಜುನ ಖಾನಪೇಠ ಅವರು ಅನುವಾದಿಸಿದ ಕಿಡ್ನಿ ಸುರಕ್ಷೆ ಪುಸ್ತಕವು ಕಿಡ್ನಿ ರೋಗಗಳ ಕುರಿತು ಸಮಗ್ರ ಮಾಹಿತಿಯನ್ನು ಹೊಂದಿದೆ.

ಈ ಪುಸ್ತಕವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಕಿಡ್ನಿ ಮತ್ತು ಕಿಡ್ನಿಯ ಗಂಭೀರ ರೋಗಗಳ ಕುರಿತ ಸಾಮಾನ್ಯ ಮಾಹಿತಿ ಮತ್ತು ರೋಗ ತಡೆಗಟ್ಟುವಿಕೆಯ ವಿಧಾನಗಳನ್ನು ವಿವರಿಸಲಾಗಿದೆ. ಮೊದಲನೇ ಭಾಗವು ಕಿಡ್ನಿ ರೋಗದ ಕುರಿತು ಜಾಗೃತಿಯನ್ನು ಪಡೆಯಬಯಸುವವರಿಗೆ ಒಳ್ಳೆಯ ಪುಸ್ತಕ.

ಎರಡನೇ ಭಾಗದಲ್ಲಿ ಸಾಮಾನ್ಯ ಕಿಡ್ನಿ ರೋಗಗಳ ಶೀಘ್ರರೋಗ ಪತ್ತೆ, ಆರೈಕೆ ಹಾಗೂ ಚಿಕಿತ್ಸೆಯ ಕುರಿತು ವಿವರಿಸಲಾಗಿದ್ದು, ಪ್ರತಿಯೊಬ್ಬ ರೋಗಿ ಮತ್ತು ರೋಗಿಯ ಕುಟುಂಬದವರಿಗೆ ಒಳ್ಳೆಯ ಮಾಹಿತಿಯನ್ನು ಒದಗಿಸುತ್ತದೆ.

ಎರಡನೇ ಭಾಗದಲ್ಲಿ ಸಾಮಾನ್ಯ ಕಿಡ್ನಿ ರೋಗಗಳ ಶೀಘ್ರರೋಗ ಪತ್ತೆ, ಆರೈಕೆ ಹಾಗೂ ಚಿಕಿತ್ಸೆಯ ಕುರಿತು ವಿವರಿಸಲಾಗಿದ್ದು, ಪ್ರತಿಯೊಬ್ಬ ರೋಗಿ ಮತ್ತು ರೋಗಿಯ ಕುಟುಂಬದವರಿಗೆ ಒಳ್ಳೆಯ ಮಾಹಿತಿಯನ್ನು ಒದಗಿಸುತ್ತದೆ.

ಈ ಪುಸ್ತಕವನ್ನು ನುರಿತು ತಜ್ಞವೈದ್ಯರು ರಚಿಸಿದ್ದಾರೆ. ಕಿಡ್ನಿ ಸಮಸ್ಯೆ, ರೋಗ ತಡೆಗಟ್ಟುವಿಕೆ ಮತ್ತು ರೋಗಿಯ ರೋಗದ ಕುರಿತು ಎಲ್ಲ ಪ್ರಶ್ನೆಗಳಿಗೆ ಈ ಪುಸ್ತಕವು ಉತ್ತರವನ್ನು ನೀಡಲಿದೆ.

"ಕಿಡ್ನಿ ಸುರಕ್ಷೆ" ಪ್ರಕಟಿಸಿದ ದಿನಾಂಕ: 2014 ಮಾಚð ಕೈಪಿಡಿ, ಪುಟ-175, ಪ್ರಥಮ ಮುದ್ರಣ ಬೆಲೆ:ರೂ.150/

ಪುಸ್ತಕ ವಿವರಗಳು

"ಕಿಡ್ನಿ ಸುರಕ್ಷೆ"
ಪ್ರಕಟಿಸಿದ ದಿನಾಂಕ : 2014
ಲೇಖಕ :ಡಾ ಮಲ್ಲಿಕಾರ್ಜುನ ಖಾನಪೇಠ
ಡಾ. ಸಂಜಯ ಪಂಡ್ಯಾ


 

Indian Society of Nephrology
wikipedia
nkf
kidneyindia
magyar nephrological tarsasag